ವಿದ್ಯಾರ್ಥಿಯ ಕಲಿಕಾ ಸಾಮಥ್ರ್ಯ ಹಾಗೂ ಸ್ಮರಣಶಕ್ತಿ ಉದ್ದೀಪನೆ

Faaip | Monday 28 June 2021ವಿದ್ಯಾರ್ಥಿಯ ಕಲಿಕಾ ಸಾಮಥ್ರ್ಯ ಹಾಗೂ ಸ್ಮರಣಶಕ್ತಿ ಉದ್ದೀಪನೆ
- ಶೃತಿ.ಎಸ್.ಶರ್ಮಾ.

ಮಾನವನ ಮೆದುಳು ಸೃಷ್ಠಿಯ ಒಂದು ಅದ್ಭುತವಾದ ರಚನೆ. ಮೆದುಳಿನ ಬೆಳವಣಿಗೆ ಗಭರ್ಾವಸ್ಥೆಯ ಮೂರನೇ ವಾರದಿಂದ  ಪ್ರಾರಂಭವಾಗಿ ಜನನದ ನಂತರ ಪ್ರೌಢಾವಸ್ಥೆಯವರೆಗೂ ಅತ್ಯಂತ ವೇಗವಾಗಿ ಬದಲಾವಣೆಗಳನ್ನು ಹೊಂದುತ್ತಿರುತ್ತದೆ. ವಯಸ್ಕರಲ್ಲಿಯೂ ಮೆದುಳು ಕ್ರಿಯಾಶೀಲವಾಗಿದ್ದು ದೇಹದ ಪ್ರತಿಯೊಂದು ಅಂಗಾಂಗವನ್ನೂ ನಿಯಂತ್ರಿಸುತ್ತದೆ.

ಮಾನವನ ಮೆದುಳಿನಲ್ಲಿ ಸರಿಸುಮಾರು 86 ಬಿಲಿಯನ್ ನರಕೋಶಗಳಿದ್ದು, ಜನನದ ನಂತರ ಮಗುವು ಸಂವೇದನೆಗಳನ್ನು ಗ್ರಹಿಸುತ್ತಿದ್ದಂತೆ ಆ ನರಕೋಶಗಳು ಪರಸ್ಪರ ಸಂಪರ್ಕ ಸಾಧಿಸುತ್ತವೆ, ಮತ್ತು ಮೆದುಳಿನ ಬೇರೆ ಬೇರೆ ಭಾಗಗಳ ಮಧ್ಯ ಸಂಪರ್ಕ ಸೇತುವೆಗಳಾಗಿ ಕಾರ್ಯ ನಿರ್ವಹಿಸುತ್ತದೆ. ಈ ಪ್ರಕ್ರಿಯೆಯಿಂದಲೇ ನಾವು ಹಲವಾರು ವಿಷಯಗಳನ್ನು ಕಲಿಯಲು ಹಾಗೂ ನೆನಪಿನಲ್ಲಿಡಲು ಸಾಧ್ಯವಾಗುತ್ತದೆ. ಮಗುವು ಐದು ವರ್ಷಕ್ಕೆ ತಲುಪುವಷ್ಟರಲ್ಲಿ ನರಕೋಶಗಳು ಅತಿ ಗರಿಷ್ಠ ಸಂಖ್ಯೆಯಲ್ಲಿ ಸಂಪರ್ಕ ಸೃಷ್ಠಿಸಿಕೊಳ್ಳುತ್ತವೆ ಹಾಗಾಗಿ ಬಾಲ್ಯಾವಸ್ಥೆಯಲ್ಲಿ ಪ್ರತಿ ವಿಷಯದಲ್ಲೂ ಕುತೂಹಲ ಹೆಚ್ಚಾಗಿದ್ದು ಕಲಿಕೆ ತ್ವರಿತ ರೀತಿಯಲ್ಲಿ ಆಗುತ್ತದೆ. ಆದರೆ ಕ್ರಮೇಣ ಕಲಿತ ಹಲವಾರು ವಿಷಯಗಳು ಅಪ್ರಸ್ತುತವಾಗುತ್ತದೆ ಹಾಗಾಗಿ ಹದಿಹರೆಯದ ವಯಸ್ಸಿಗೆ ತಲುಪುವಾಗ ಅಂತಹ ಅಪ್ರಸ್ತುತ ಸಂಪರ್ಕಗಳೆಲ್ಲಾ ಕಡಿದುಹೋಗುತ್ತದೆ. ಆದ್ದರಿಂದ ಬಾಲ್ಯದ ಹಲವಾರು ವಿಷಯಗಳು  ನಮಗೆ ಮರೆತು ಹೋಗುತ್ತದೆ. ಈ ಪ್ರಕ್ರಿಯೆಗೆ ಸಮರುವಿಕೆ ಎಂದು ಕರೆಯುತ್ತಾರೆ. ಹೀಗೆ ಪರಿಸ್ಥಿತಿ, ಪರಿಸರದ ಆಧಾರದ ಮೇಲೆ ಸಮರುವಿಕೆ ಹಾಗೂ ಸಂಪರ್ಕ ಸ್ಥಾಪನೆ-ಮರುಸ್ಥಾಪನೆ ಮತ್ತು ಇನ್ನೂ ಹಲವು ಮಾರ್ಪಾಡುಗಳು ಮೆದುಳಿನ ಒಳಗೆ ಆಗುತ್ತಲೇ ಇರುತ್ತದೆ.

ಒಂದು ನರ ಇನ್ನೊಂದು ನರಕೋಶದ ಜೊತೆ ಸಂವಹನ ಮಾಡಿದಾಗ ಮಾತ್ರ ಸಂಪರ್ಕ ಸಾಧ್ಯವಾಗುತ್ತದೆ.  ಈ ರೀತಿಯ ಸಂವಹನಕ್ಕೆ ಹಲವು ರಾಸಾಯನಿಕ ಧಾತುಗಳು ಕಾರಣವಾಗಿರುತ್ತದೆ. ಇದನ್ನೇ ನರಪ್ರೇಕ್ಷಕಗಳು ಎಂದು ಕರೆಯುತೇವೆ. ನರಮಂಡಲದಲ್ಲಿ ಸಿಗುವ ಪ್ರಮುಖ ನರಪ್ರೇಕ್ಷಕಗಳೆಂದರೆ ಗ್ಲೂಟಮೇಟ್, ಉಂಃಂ, ನಾರ್-ಎಪಿನೆಫ್ರಿನ್,ಡೋಪಮೀನ್, ಸೆರೆಟೋನಿನ್, ಅಸಿಟೈಲ್ಖೋಲೀನ್ ಮತ್ತು ನ್ಯೂರೋಪೆಪ್ಟೈಡ್ಗಳು. ಇವುಗಳಲ್ಲಿ ಯಾವುದೇ ಏರುಪೇರಾದರೂ ಅದು ಮಾನಸಿಕ ಅಸ್ವಸ್ಥತೆಗಳಿಗೆ ಎಡೆಮಾಡಿಕೊಡುತ್ತದೆ. ಮೇಲೆ ಹೇಳಿದ ನರಪ್ರೇಕ್ಷಕಗಳಲ್ಲಿ ನಮ್ಮ ಕಲಿಕೆ ಮತ್ತು ಸ್ಮರಣಶಕ್ತಿಗೆ ಪ್ರೇರಣಾದಾಯಕವಾದ ನರಪ್ರೇಕ್ಷಕವೆಂದರೆ ಅದು ಡೋಪಮೀನ್. ಇದು ನಮ್ಮ ಮನಸ್ಸಿಗೆ ಆಹ್ಲಾದವನ್ನೂ, ಸ್ಫೂತರ್ಿಯನ್ನೂ ನೀಡಿ ನಮ್ಮ ಕಲಿಕೆಗೆ ಉತ್ತೇಜನವನ್ನು ನೀಡುತ್ತದೆ. ಮೆದುಳಿನಲ್ಲಿ ಡೊಪಮೀನ್ ಅಂಶ ಕಡಿಮೆಯಾದರೆ ಕಲಿಕೆಯಲ್ಲಿ ನಿರಾಸಕ್ತಿ, ಏಕಾಗ್ರತೆಯ ಕೊರತೆ, ಗ್ರಹಣಶಕ್ತಿಯ ಕೊರತೆ, ವಿಳಂಬ ಪ್ರವೃತ್ತಿ , ನಿದ್ರಾಹೀನತೆ, ಮನಸ್ಥಿತಿಯ ಏರುಪೇರು, ಮಾನಸಿಕ ಖಿನ್ನತೆ, ಚಟ ಹಾಗೂ ವ್ಯಸನವೂ ಉಂಟಾಗಬಹುದು ಎಂದು ಬಹಳಷ್ಟು ಸಂಶೋಧನೆಗಳಿಂದ ತಿಳಿದು ಬಂದಿದೆ.

ಹಾಗಾದರೆ ಡೋಪಮೀನ್ ಕೊರತೆಗೆ ಕಾರಣವೇನೆಂದು ನೋಡುವುದಾದರೆ, ಮಕ್ಕಳಲ್ಲಿ  ಹಾಗೂ ವಯಸ್ಕರಲ್ಲಿ ಪೌಷ್ಠಿಕಾಂಶದ ಕೊರತೆ, ಅತಿಯಾದ ಮಾನಸಿಕ ಒತ್ತಡ, ಬದಲಾದ ಜೀವನ ಶೈಲಿ, ಆಹಾರ ಶೈಲಿ, ಬೊಜ್ಜುತನ ಇತ್ಯಾದಿ. ಇದರಿಂದ ಸಹಜವಾಗಿಯೇ ಕಲಿಕಾ ಸಾಮಥ್ರ್ಯ ಕುಂಠಿತವಾಗುತ್ತದೆ. ವಿದ್ಯಾರ್ಥಿಗಳು ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೃತಕ ಆಹಾರ ಸಾಮಗ್ರಿಗಳ ಹಾಗೂ ಔಷಧಿಗಳ ಮೊರೆಹೋಗುತ್ತಿರುವುದು ವಿಪರ್ಯಾಸವೇ ಸರಿ. ಇದರ ಬದಲು ನೈಸಗರ್ಿಕ ರೀತಿಯಲ್ಲಿ ಡೋಪಮೀನ್ನ್ನು ಹೆಚ್ಚಿಸಬಹುದರಿಂದ ಕಲಿಕೆ ಹಾಗೂ ಸ್ಮರಣಶಕ್ತಿಯನ್ನು ವೃದ್ಧಿಸಬಹುದು. ಡೋಪಮೀನ್ ತಯಾರಾಗುವುದು ಟೈರೋಸಿನ್ ಎಂಬ ಅಮೈನೊ ಆಸಿಡ್ನಿಂದ. ಇದನ್ನು ಬಹಳಷ್ಟು ಪ್ರೊಟಿನ್ಯುಕ್ತ  ಆಹಾರದ ಬಳಕೆಯಿಂದಲೂ ಪಡೆಯಬಹುದು. ಇವುಗಳಲ್ಲಿ ಬಾದಾಮಿ, ಅವೋಕಾಡೋ, ಬಾಳೆಹಣ್ಣು, ಅವರೇಕಾಳು, ಹಸಿರುಸೊಪ್ಪು, ತರಕಾರಿ, ಹಾಲು, ಮೊಟ್ಟೆ ಇವೆಲ್ಲಾ ಡೋಪಮೀನ್ ತಯಾರಿಕೆಗೆ ಹೆಚ್ಚು ಪೂರಕವಾಗಿದೆ. ನಮ್ಮ ಕರುಳಿನಲ್ಲಿ ಬ್ಯಾಕ್ಟೀರಿಯಾದ ಸಾಮ್ರಾಜ್ಯವೇ ಇದ್ದು, ಇವು ಕೂಡ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಕರುಳು-ಮೆದುಳಿನ ಅಕ್ಷರೇಖೆ (ಉಣಣ-ಃಡಿಚಿಟಿ ಂಥ)  ಎನ್ನುತೇವೆ. ನಾವು ಸೇವಿಸುವ ಸಮತೋಲನ ಆಹಾರದಿಂದ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀ-ರಿಯಾಗಳು ಹೆಚ್ಚಾಗುವುದರಿಂದ ಮೆದುಳಿನಲ್ಲಿರುವ ಜೀವಕೋಶಗಳಿಗೆ ಸೂಚಿಸಿ ಡೋಪಮೀನ್, ಸೆರೊಟೋನಿನ್, ನಾರ್-ಎಪಿನೆಫ್ರಿನ್ ನರಪ್ರೇಕ್ಷಕಗಳನ್ನು ಸ್ರವಿಸುವಂತೆ ಮಾಡುತ್ತದೆ. ಆದರೆ ಕೆಟ್ಟ ಬ್ಯಾಕ್ಟೀ- ರಿಯಾಗಳು ಕೆಲವು ವಿಷಯುಕ್ತ ರಾಸಾಯನಿಕಗಳನ್ನು ಬಿಡುಗಡೆಗೊಳಿಸಿ ಆ ಎಲ್ಲಾ ನರಪ್ರೇಕ್ಷಕಗಳ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಹಾಗಾಗಿ ನಮ್ಮ ಸರಿಯಾದ ಆಹಾರ ಪದ್ದತಿ ಹಾಗೂ ಜೀವನ ಶೈಲಿಯಿಂದ ನಮ್ಮ ಮೆದುಳಿನ ಮೇಲೆ ಒಳ್ಳೆಯ ಪರಿಣಾಮಗಳಾಗಿ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ದೈಹಿಕ ವ್ಯಾಯಾಮ, ಕ್ರೀಡೆ, ಧ್ಯಾನ, ವ್ಯಾಯಾಮ ಇವುಗಳಿಂದ ಮೆದುಳಿಗೆ ರಕ್ತ ಪರಿಚಲನೆ ಹೆಚ್ಚಾಗಿ, ಆಮ್ಲಜನಕ ಹಾಗೂ ಗ್ಲೂಕೋಸ್ ಪೂರೈಕೆ ಸರಿಯಾದ ರೀತಿಯಲ್ಲಿ ಆಗುತ್ತದೆ. ಇದರಿಂದ ಕಲಿಕೆಗೆ ಪೂರಕವಾದ  ಹಲವಾರು ರಾಸಾಯನಿಕ ಕ್ರಿಯೆಗಳು ಸಮರ್ಪಕವಾಗಿ ನಡೆಯುತ್ತದೆ.

ಯೋಗ, ಧ್ಯಾನಗಳನ್ನು ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಅಳವಡಿಸುವುದ- ರಿಂದ ಪಠಣ, ಮನನ ಹಾಗು ಸ್ಮರಣಶಕ್ತಿ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೋಷಕರ ಪಾತ್ರ: ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಮಾತಿನಂತೆ, ಪೋಷಕರು ತಮ್ಮ ಮಕ್ಕಳ ಆರಂಭಿಕ ಜೀವನವನ್ನು ಸುಂದರವಾಗಿ ರೂಪಿಸಿದರೆ ಅವರ ಮುಂದಿನ ಜೀವನ ಸಮೃದ್ಧವಾಗಿ ಮಾಪರ್ಾಡಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ವಿಶ್ಲೇಶಿಸುವುದಾದರೆ, ಮಗುವಿನ ಜನನದ ನಂತರ ಮೊದಲ ಐದು ವರ್ಷ ಹಾಗೂ ಹರೆಯದ ಸಮಯ ಅಂದರೆ 10 ರಿಂದ 13 ವರ್ಷಗಳನ್ನು ಖಣಡಿಜ ಊಥಿಠಿಠಡಿಜಠಿಠಟಿಟಿಜ ಕಜಡಿಠಜ (ಖಊಖಕ) ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಒತ್ತಡ ಉಂಟಾದರೆ ಅದನ್ನು ಆರಂಭಿಕ ಜೀವನದ ಒತ್ತಡ(ಇಚಿಡಿಟಥಿ ಐಜಿಜ ಖಣಡಿಜ) ಎನ್ನುತ್ತಾರೆ. ಉದಾಹರಣೆಗೆ ಮನೆಯಲ್ಲಿ ಅಶಾಂತಿ, ತಂದೆ-ತಾಯಿಯ ಮಧ್ಯೆ ಜಗಳ, ಮದ್ಯವ್ಯಸನಿ ತಂದೆ, ಪೋಷಕರಿಂದ ಮಕ್ಕಳ ನಿರ್ಲಕ್ಷ್ಯ ಇವುಗಳಿಂದ ಮಕ್ಕಳು ಒತ್ತಡ ಅನುಭವಿಸುತ್ತಾರೆ. ಈ ರೀತಿಯ ಆರಂಭಿಕ ಜೀವನದ ಒತ್ತಡದಿಂದ ಮಕ್ಕಳಲ್ಲಿ ಹಾಗೂ ವಯಸ್ಕರಾದ ಮೇಲೂ ಆತಂಕ, ಖಿನ್ನತೆ ಇತ್ಯಾದಿ ಮಾನಸಿಕ ಅಸಹಜತೆ ಉಂಟಾಗುತ್ತದೆ. ಯಾವುದೇ ರೀತಿಯ ಒತ್ತಡ ವಿದ್ಯಾರ್ಥಿಯ ಕಲಿಕಾ ಸಾಮಥ್ರ್ಯವನ್ನು ತಗ್ಗಿಸುತ್ತದೆ.

ಹಾಗೆಯೇ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಸೃಜನಶೀಲ ಹವ್ಯಾಸಗಳನ್ನು ಬೆಳೆಸಬೇಕು. ಚಿತ್ರಕಲೆ, ಕಸೂತಿ, ಛಾಯಾಗ್ರಹಣ, ಪಕ್ಷಿ ವೀಕ್ಷಣೆ, ಸಂಗೀತಾ, ನೃತ್ಯ, ನಾಟಕ ಇತ್ಯಾದಿಗಳಿಂದ ಮಕ್ಕಳಲ್ಲಿ ಒತ್ತಡ, ಖಿನ್ನತೆ ದೂರವಾಗಿ ಕಲಿಕೆಯಲ್ಲಿ ಆಸಕ್ತಿ ಹೆಚ್ಚುತ್ತದೆ. ಮಕ್ಕಳಲ್ಲಿ 8 ರಿಂದ 10 ಗಂಟೆಗಳ ನಿದ್ರೆಯ ಅವಶ್ಯಕತೆಯಿದ್ದು, ನಿದ್ರಾವಸ್ಥೆಯಲ್ಲಿ  ಮೆದುಳು ಅತ್ಯಂತ ಕ್ರಿಯಾಶೀಲವಾಗಿದ್ದು  ಕಲಿತ ವಿದ್ಯೆಯ ಘನೀಕರಣಉಂಟಾಗುತ್ತದೆ.  ಆದರೆ ಅತಿಯಾದ ಮೊಬೈಲ್ ಬಳಕೆಯಿಂದ ನಿದ್ರೆಗೆ ಬೇಕಾದ ಮೆಲಟೋನಿನ್ ಎಂಬ ರಾಸಾಯನಿಕದ ಸವಕಳಿಯುಂಟಾಗಿ ನಿದ್ರಾಹೀನತೆ ಉಂಟಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಹಾಳಾಗಿ ಕಲಿಕಾ ಸಾಮಥ್ರ್ಯ ಹಾಗೂ ಸ್ಮರಣಶಕ್ತಿ ಕುಂಠಿತವಾಗುತ್ತದೆ. ಆದ್ದರಿಂದ ಮಕ್ಕಳನ್ನು ಮೊಬೈಲ್ನಿಂದ ದೂರವಿರಿಸುವುದು ಕಲಿಕೆಗೆ ಬಹಳಷ್ಟು ಸಹಕಾರಿಯಾಗಿದೆ.

ಶಾಲೆ ಹಾಗೂ ಶಿಕ್ಷಕರ ಪಾತ್ರ: ಪ್ರತಿ ವಿದ್ಯಾರ್ಥಿಗೂ ಶಿಕ್ಷಕರ ಪ್ರೀತಿ, ಸ್ಫೂರ್ತಿ ಹಾಗೂ ಪ್ರೋತ್ಸಾಹ ಬಹಳ ಮುಖ್ಯ. ನಂತರ ಕಲಿಕೆಯಲ್ಲಿ ಆಸಕ್ತಿ ಮತ್ತು ಕುತೂಹಲ ಹೆಚ್ಚಿಸುವುದೂ ಶಿಕ್ಷಕರದ್ದೇ ಜವಾಬ್ದಾರಿ. ಇವುಗಳಿಂದ ಕೂಡ ಮೆದುಳಿನಲ್ಲಿ ಡೋಪಮೀನ್ ಹೆಚ್ಚಾಗುವುದೆಂದರೆ ನಿಮಗೆ ಆಶ್ಚರ್ಯವಾಗಬಹುದು!! ಆದರೆ ಇದು ಸತ್ಯ. ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳುವುದು ಸಹಕಾರಿಯೆನಿಸುತ್ತದೆ.

1. ಕ್ಲಿಷ್ಠಕರ ವಿಷಯಗಳನ್ನು ಬೇರೆ ಬೇರೆ ರೀತಿಯಲ್ಲಿ ಪದೇ ಪದೇ ಹೇಳುವುದು ಮತ್ತು ಅರ್ಥ ಮಾಡಿಸುವುದು. ಹೀಗೆ ಮಾಡುವುದರಿಂದ  ಎಂಬ ಪ್ರಕ್ರಿಯೆ ನರಕೋಶಗಳ ಮಧ್ಯೆ ನಡೆಯುವುದರಿಂದ ವಿಷಯವು ದೀರ್ಘಾವಧಿಯಲ್ಲಿ ನೆನಪಿನಲ್ಲಿ ಉಳಿಯುತ್ತದೆ.
2. ಬಹುಸಂವೇದನೆ ವಿಧಾನ ಒಂದು ವಿಷಯವನ್ನು ನೋಡುವುದು, ಕೇಳುವುದು, ಸ್ಪರ್ಶ, ಚಲನ ಹೀಗೆ ಅನೇಕ ಸಂವೇದನೆಗಳನ್ನು ಬಳಸಿ ಕಲಿಯುವುದರಿಂದ ಮೆದುಳಿನ ಎಲ್ಲಾ ಭಾಗಗಳೂ ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಕಲಿಕೆ, ಗ್ರಹಣಶಕ್ತಿ ಸುಲಭವಾಗುತ್ತದೆ.
3. ಚಟುವಟಿಕೆ ಆಧಾರಿತ ಕಲಿಕೆ- ಪ್ರಯೋಗಗಳು, ಕೃತಕ ಮಾದರಿಗಳು, ಸರಳ ಉಪಕರಣಗಳನ್ನು ಬಳಸಿ ಮಕ್ಕಳ ಮೂಲಕವೇ ಅಭ್ಯಾಸ ಮಾಡಿಸುವುದರಿಂದ ವಿಷಯಗಳು ಸುಲಭವಾಗಿ ಅರ್ಥವಾಗಿ ನೆನಪಿನಲ್ಲಿ ಉಳಿಯುತ್ತದೆ.
4. ಮಕ್ಕಳನ್ನು ವೇದಿಕೆಗೆ ಕರೆತನ್ನಿ- ಪಠ್ಯ ಹಾಗೂ ಪಠ್ಯೇತರ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಪರ-ವಿರೋಧ ಚರ್ಚೆ, ಸೆಮಿನಾರ್, ಭಾಷಣದ ಮೂಲಕ ವಿಷಯ ಮಂಡನೆ, ಇತ್ಯಾದಿಗಳನ್ನು ಶಾಲೆಗಳಲ್ಲಿ ಆಯೋಜಿಸುವುದರಿಂದ ಮಕ್ಕಳಲ್ಲಿ ಆಲೋಚನಾ ಶಕ್ತಿ, ವಾಕ್ಚಾತುರ್ಯ, ಸರಿ-ತಪ್ಪಿನ ವಿಮರ್ಶೆ, ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಹಾಗೂ ನಾಯಕತ್ವ ಗುಣಗಳು ಬೆಳೆಯುತ್ತದೆ. ಇವೆಲ್ಲದಕ್ಕೂ ಮುಮ್ಮೆದಳು ಎಂಬ ಮೆದುಳಿನ ಭಾಗಗಳು ಸಹಕಾರಿಯಾಗಿದೆ.
5. ಕ್ರೀಡೆಗಳಿಗೂ ಹೆಚ್ಚಿನ ಪ್ರೋತ್ಸಾಹ- ಕ್ರೀಡೆಗಳಿಂದ ದೈಹಿಕ ಸಾಮಥ್ರ್ಯ ಹೆಚ್ಚುವುದಲ್ಲದೆ ಮಾನಸಿಕ ದೃಢತೆ ಹೆಚ್ಚುತ್ತದೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೇನಂತೆ ಮತ್ತೆ ಗೆದ್ದೇ ಗೆಲ್ಲುತ್ತೇನೆಂಬ ಧೈರ್ಯ, ಛಲ ಬೆಳೆಸಿಕೊಳ್ಳುತ್ತಾರೆ. ಈ ಸ್ಫೂರ್ತಿಯೇ ಕಲಿಕೆಗೆ ಮುಖ್ಯ.

 ಈ ರೀತಿ ಪರಿಸರ, ಪೋಷಕರು, ಶಿಕ್ಷಕರು ಹಾಗೂ ಸ್ವತಃ ವಿದ್ಯಾರ್ಥಿಯ ಪಾತ್ರವು ಬೌದ್ಧಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿದ್ದು ವಿದ್ಯಾರ್ಥಿಯ ಗುರಿ ಸಾಧನೆಗೆ ಹಾಗು ಯಶಸ್ಸಿನ ಶಿಖರವನ್ನು ತಲುಪಲು ದಾರಿದೀಪವಾಗುತ್ತದೆ 

Previous
Next Post »

No comments:

Post a Comment

Copyright © Faaip. All rights reserved.